ಹಣದ ಉಳಿತಾಯ ~ ಸ್ವಾಸ್ಥ್ಯ ರಕ್ಷಣೆ ~ ಸುಗಮ ಸಂಚಾರ ~ ಸಂತಸದ ಸವಾರಿ

ಮೂಲೋದ್ದೇಶ

ಪ್ರತಿದಿನ ನಿಯಮಿತವಾಗಿ ಓಡಾಡುವ ಸ್ಥಳೀಯರು ಹಾಗೂ ಸಾಂದರ್ಭಿಕವಾಗಿ ಬರುವ ಸಂದರ್ಶಕರು ಮತ್ತು ಪ್ರವಾಸಿಗಳು, ಇವರೆಲ್ಲರನ್ನೂ ಮೋಟರ್ ವಾಹನಗಳ ಬದಲಿಗೆ ಸೈಕಲ್ ಬಳಸಲು ಪ್ರೋತ್ಸಾಹಿಸಿ, ಆ ಮೂಲಕ ಪರಿಸರ ಮತ್ತು ರಸ್ತೆಸಾರಿಗೆ ಮೂಲಗಳಿಂದ ಉದ್ಭವಿಸುತ್ತಿರುವ ಹಲವಿಧ ಆಪತ್ತುಗಳನ್ನು ತಗ್ಗಿಸುವುದು, ಸಂಚಾರದ ಸೌಕರ್ಯವನ್ನು ಹಿಗ್ಗಿಸುವುದು, ಮತ್ತು ಸಾಮಾನ್ಯ ನಾಗರಿಕರಿಗೆ ದಿನನಿತ್ಯದ ವಾಹನ ವ್ಯವಹಾರದ ಖರ್ಚನ್ನು ಮಿತಗೊಳಿಸುವುದು, ಇವೇ “ಟ್ರಿಣ್‍ಟ್ರಿಣ್” ಸೇವೆಯ ಮೂಲೋದ್ದೇಶಗಳಾಗಿವೆ.

ಪರಿಸರ ಮಾಲಿನ್ಯವನ್ನು ತಗ್ಗಿಸುವುದರಲ್ಲಿ ನೆರವಾಗುವುದರಿಂದಾಗಿ “ಟ್ರಿಣ್‍ಟ್ರಿಣ್” ಒಟ್ಟು ಸಾರ್ವಜನಿಕ ಆರೋಗ್ಯಕ್ಕೆ ಅನುವಾಗುವುದಲ್ಲದೆ, ಸೈಕ್ಲಿಂಗ್ ಕಸರತ್ತನ್ನು ದಿನವಹಿ ಓಡಾಟದ ಒಂದು ಸಹಜ ಭಾಗವಾಗಿಯೇ ಸಾಧ್ಯಗೊಳಿಸಿ, ಜನರ ವೈಯಕ್ತಿಕ ಆರೋಗ್ಯ ಸುಧಾರಣೆಗೂ ಒಂದು ವರದಾನವಾಗುತ್ತದೆ.

ಮೈಸೂರಿನಲ್ಲಿ ಪರಿಸರ ಆಂದೋಲನವನ್ನು ಉತ್ತೇಜಿಸುವುದಲ್ಲದೆ, ತಮ್ಮ ನಗರದ ಬಗ್ಗೆ ಹೆಮ್ಮೆ ಪಟ್ಟು, ನಗರಾಭಿವೃದ್ಧಿ ಕಾರ್ಯರಭಸಗಳ ನಡುವೆ ತಮ್ಮ ನಗರದ ವಿಶಿಷ್ಟ ಗುಣಗಳನ್ನು ಕಾಪಾಡಿಕೊಳ್ಳುವ ಪ್ರಜ್ಞಾವಂತ ನಾಗರಿಕರ ಒಂದು ಬಲಿಷ್ಠ ಸಮುದಾಯವನ್ನು ಬೆಳೆಸುವುದೂ “ಟ್ರಿಣ್‍ಟ್ರಿಣ್” ಯೋಜನೆಯ ಆಕಾಂಕ್ಷೆಗಳಲ್ಲಿ ಸೇರಿದೆ.© 2017 Trin Trin | All Rights Reserved