ದಾರಿ ಬಿಡಿ, ದಾರಿ ಬಿಡಿ “ಟ್ರಿಣ್‍ಟ್ರಿಣ್‍ಟ್ರಿಣ್”

ಈ ಹೆಸರೇಕೆ?

“ಟ್ರಿಣ್‍ಟ್ರಿಣ್” ಎಂದೊಡನೆ ಹಳೆಯ ಮೈಸೂರಿಗರ ನೆನಪಿನಲ್ಲಿ ಒಂದು ಹಿತಕರ ಶಬ್ದದ ಅಲೆಗಳೆದ್ದು, ಸೈಕಲ್ ವಾಹನವು ರಸ್ತೆಗಳ ರಾಜನಾಗಿದ್ದ  ಮೈಸೂರಿನ ‘ಶಾಂತಿಪರ್ವ’ ದಿನಗಳಿಗೆ ಅವರನ್ನು ಸೆಳೆದೊಯ್ಯುವುವು. “ಟ್ರಿಣ್‍ಟ್ರಿಣ್” ಅದೇ ನಿಡುಗಾಲದ-ನೆಚ್ಚಿನ ಶ್ರೀಸಾಮಾನ್ಯ ವಾಹನದ, ಕಾಲ-ಗೌರವಿತ, ಪರಿಸರ-ಮಿತ್ರ, ಸೌಮ್ಯ-ಆದರೂ-ಪರಿಣಾಮಕರ ‘ಎಚ್ಚರಿಕೆ ಗಂಟೆ’ ಎಂಬುದು ಸರ್ವವೇದ್ಯ.© 2017 Trin Trin | All Rights Reserved