ಹಿಮ್ಮೆಟ್ಟದೆ ಮೆಟ್ಟಿ ಇದಿರಿಲ್ಲದ
ಈ ಇಗ್ಗಾಲಿಯನು

ಬಳಕೆ ಕ್ರಮ

“ಟ್ರಿಣ್‍ಟ್ರಿಣ್” ಹಬ್ ಮೂಲಕ ಸೈಕಲ್ ಪಡೆಯಲು ೪-ಹಂತಗಳ ಒಂದು ಕ್ರಮವಿದೆ:

ನೋಂದಾಯಿಸಿ ~ ಬಿಡಿಸಿಕೊಳ್ಳಿ ~ ಸವಾರಿ ಮಾಡಿ ~ ಹಿಂದಿರುಗಿಸಿ

ನೋಂದಾಯಿಸಿ

 • ಅ೦ತರಜಾಲದ ಮೂಲಕ   ಅಥವಾ   “ಟ್ರಿಣ್‍ಟ್ರಿಣ್”  ಸ್ಮಾರ್ಟ್ ಫ಼ೋನ್ app ಮೂಲಕ  ಅಥವಾ   ಯಾವುದಾದರು “ಟ್ರಿಣ್‍ಟ್ರಿಣ್” ನೋಂದಣಿ ಕೇಂದ್ರಗಳ ಮೂಲಕ ನೋಂದಣಿ ಮಾಡಿಸಿಕೊಳ್ಳಿ.
 • ನೋಂದಣಿ ಮುಗಿದ ನಂತರ, ಸದಸ್ಯರಿಗೆ ಟ್ರಿಣ್‍ಟ್ರಿಣ್ ಸ್ಮಾರ್ಟ್ ಕಾರ್ಡ್ ನೀಡಲಾಗುವುದು.

ಬಿಡಿಸಿಕೊಳ್ಳಿ

 • “ಟ್ರಿಣ್‍ಟ್ರಿಣ್”  ಸ್ಮಾರ್ಟ್ ಕಾರ್ಡ್ ತೆಗೆದು ನಿಮಗೆ ಬೇಕಿರುವ ಸೈಕಲ್ ಪಕ್ಕದಲ್ಲಿರುವ ರೀಡರ್ ಯಂತ್ರದ ಮೇಲಿಡಿ.
 • ಎಲ್ಲಾ ಎಲ್ಇಡಿ ಸಿಗ್ನಲ್ ಬೆಳಗುವುದನ್ನು ಖಚಿತಪಡಿಸಿಕೊಳ್ಳಿ.
 • ಈಗ ನಿಮ್ಮ ಸೈಕಲ್ ಒಯ್ಯಲು ಸಿದ್ಧವಾಗಿದೆ.

ಸವಾರಿ ಮಾಡಿ

 • ಜಾಗರೂಕತೆ ಮತ್ತು ಜವಾಬ್ದಾರಿಯಿಂದ ಸೈಕಲ್ ಓಡಿಸಿ.
 • ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ.

ಹಿಂದಿರುಗಿಸಿ

 • ಹಬ್‍ನ ಒಂದು ಖಾಲಿ ಡಾಕ್‍‍ನೊಳಗೆ ’ಸೈಕಲ್ ಕ್ಲಿಪ್’ ಜಾರಿಸಿ ಮತ್ತು ಬೈಸಿಕಲ್ ಸರಿಯಾ ಲಾಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. .
 • “ವ್ಯವಹಾರ ಪೂರ್ಣಗೊಂಡಿದೆ” ಎಂಬ ಸಿಗ್ನಲ್ ಬೆಳಗುವುದನ್ನು ಖಚಿತಪಡಿಸಿಕೊಳ್ಳಿ .
 • “ರೆಡಿ” ಎಲ್ಇಡಿ ಸಿಗ್ನಲ್ ಆನ್ ಇದೆ ಎಂದು ಗಮನಿಸಿ, ಬೈಸಿಕಲ್ ರಿಟರ್ನ್ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ.
 • ನಿಮ್ಮ ಕಾರ್ಡ್ ನವೀಕರಿಸಲು ಕಿಯೋಸ್ಕ್ ಬಳಿ ನಿಮ್ಮ ಸ್ಮಾರ್ಟ್ ಕಾರ್ಡ್ ಟ್ಯಾಪ್

‘ಜಾಗದಿಂದ ಜಾಗ’ ಸವಾರಿ

ಹಲವಾರು ಜಾಗಗಳಿಗೆ ಹೋಗಬೇಕಾದಲ್ಲಿ, ಒಂದು ಜಾಗಕ್ಕೆ ಹೋದೊಡನೆ ಅಲ್ಲಿಗೆ ಹತ್ತಿರದ ಹಬ್ ಕೇಂದ್ರಕ್ಕೆ ನಿಮ್ಮ ಸೈಕಲ್ಲನ್ನು ಹಿಂದಿರುಗಿಸಿ. ನಿಮ್ಮ ಕೆಲಸ ಮುಗಿದ ಮೇಲೆ ಮತ್ತೊಮ್ಮೆ ಬೇಕಾದರೆ, ನಿಮಗೆ ಈಗ ಹತ್ತಿರವಿರುವ ಹಬ್ ಕೇಂದ್ರದಿಂದ ಸೈಕಲ್ಲನ್ನು ತೆಗೆದುಕೊಂಡು ಪ್ರಯಾಣವನ್ನು ಮುಂದುವರೆಸಿ. ಹೀಗೆ ಮಾಡುವುದರಿಂದ, ನೀವು ಸವಾರಿಯಲ್ಲಿಲ್ಲದಿರುವಾಗ  ವ್ಯರ್ಥವಾಗಿ  ಉಳಿದಿರುವ ಸೈಕಲ್‍, ಅದಕ್ಕಾಗಿ ಕಾಯುತ್ತಿರುವ ಬೇರೆಯವರ ಉಪಯೋಗಕ್ಕೆ ಬರುತ್ತದೆ.© 2017 Trin Trin | All Rights Reserved